ಜೋಡಿ
ನೀ ಒಲವೆರೆದೆ ..

ನಾ ನಲಿದೆ.
ನಗುವಾದ ನಿನ್ನೊಡನೆ
ನಾನರಳು ಸುಮವಾದೆ.
ಬದುಕಿಗಾದೆ ನೀ ಕನಸು ಬಿತ್ತುವ ರೈತೆ.
ಉಳುಮೆಯೆನ್ನ ಹೊಣೆ, ತೆನೆ ವಿಶ್ವಾತ್ಮನದು.
ನೆರೆಯಿರಲಿ ಬರವಿರಲಿ
ಬಿಡದೆ ಉಬ್ಬರವಿಳಿತಗಳಿರಲಿ,
ಬಲಿತ ಜೋಡೆತ್ತಿನಂತೆ
ಎಳೆವ ಸಿಂಗರದ ಬಾಳ ಬಂಡಿ ..
ಎಂದಿಗೂ ಜೊತೆಗಿರು ಪ್ರೀತಿ, ಮಮತೆಯಾಗಿ...
-ರಾಜ
Nice one Dosta !!
ReplyDelete