Friday, June 15, 2012

ದರ್ಪಣ

ದಿವ್ಯ ಬೆಳಗು ಅದಮ್ಯ ತಿಂಗಳ
ನಿತ್ಯ ಎಮ್ಮಯ ನೋಟಗಳ್
ಚಿತ್ರ ಕೃಪೆ : ನಾಗೇಂದ್ರ  ಮಯ್ಯ 
ಕಪ್ಪು ಬಿಳುಪಿನ ಚಕ್ಷು ಚಿತ್ರಕೆ 
ಬಣ್ಣ ಬಳಿದನು ಬ್ರಹ್ಮನೇ .

ಚಿತ್ತ ಭಿತ್ತಿಯ ಸುತ್ತ ಹರಿದಿದೆ 
ಕೆಂಪು ಚಿಗುರಿನ ತೋರಣ 
ನೆರಳು ಬೆಳಕಿನ ಹಚ್ಚೆ ಹುಯ್ಯಲು 
ಕಾದ ಕಣ್ಣಲಿ ಸಂಭ್ರಮ .

ಇದೋ ..
ಹಚ್ಚ ಹಸುರಿನ ದಿಬ್ಬಣಕ್ಕೆ 
ಗಾಳಿ ಗಂಧದ ಪರಿಮಳ 
ಎತ್ತಲಿತ್ತೋ ಸುಪ್ತ ಸ್ವಪ್ನಗಳ್ 
ಬೆತ್ತಲಾಯಿತು ಈ ಕ್ಷಣ .                                               

***************



1 comment:

  1. Prakrutiya Hasurige hasiraada ninnaya hrudayada hurupige hosadaagi nanna haaraike...

    olle kavana; odi khushi aatu.

    Cheers,
    Manju

    ReplyDelete