Thursday, October 4, 2012

ಭ್ರಮೆ

ನಸುಕಿನಾ ಸ್ವಪ್ನದೊಳು
ಬದುಕ ಮುಂಜಾವಿನೊಳು ,
ಹರಿ ಹಾಯ್ದ ಕಷ್ಟದೊಳು 
ನಸು ನಗೆಯ ಕ್ಷಣಗಳಲು
ಬೆಂಬಿಡದೀ ಭ್ರಮೆಯ ನೆರಳು .

ಮೊರೆವ ಕಡಲೊಳು ಮಿಂದು 
ನಡುಕವೆಬ್ಬಿದೆ ಕರುಳು
ಉರಿವ ರವಿ ಸೂರಿನಡಿ
ಹರಳು ಮೈಮನಗಳೆರಡು.
ಚಿಂತೆಯೊಂದಂಚಿನಲಿ ಚಿಂತನೆಯು ಮರು ಕ್ಷಣದಿ
                                                      ಇಂತೊಂದು ಗಳಿಗೆಯಲಿ ಹೇಗೆ ಸಾರಂಶಿಸಲಿ....??

No comments:

Post a Comment